New Delhi, 07 Nov (Amar Nath Prasad)
Mrs Universe Charm 2019, Sudha M, Founder and Director of Sudha Ventures Global Events, has been conferred with the prestigious Global Event Excellence Award 2026 in recognition of her remarkable contributions and international achievements in the global events industry.
The award was presented by renowned Bollywood actor and philanthropist Sonu Sood at the Bharat Leadership Summit Awards 2026, held in New Delhi.
Beginning her professional journey in the beauty industry in 1996, Sudha M has successfully established herself as an international event organiser. Through Sudha Ventures Global Events, she has been actively promoting Indian talent, fashion, culture, women’s empowerment and international recognition.
On the special occasion of Kannada Rajyotsava, Sudha M proudly represented Karnataka on the national platform and dedicated the prestigious honour to all Kannadigas and the people of India.
watch….India Create History! Beat Japan 4-1 to Win Record 6th Asian Champions Trophy
Expressing her happiness over receiving the award, Sudha M said, “This award is not just my achievement; it belongs to every Kannadiga who has supported, encouraged and blessed my journey. Their love, trust and good wishes have helped Sudha Ventures Global Events shine on national and international platforms. I proudly dedicate this honour to Karnataka and India.”
Through international events, beauty pageants, cultural celebrations and various women empowerment initiatives, Sudha Ventures Global Events continues to provide opportunities to emerging talent while showcasing Karnataka’s rich cultural identity and achievements on the global stage.
Reaffirming her commitment to taking the organisation to greater heights, Sudha M said, “From Karnataka to the global stage, our journey continues with bigger dreams and stronger determination.”
………………………………….
ಜಾಗತಿಕ ಈವೆಂಟ್ ಎಕ್ಸಲೆನ್ಸ್ ಪ್ರಶಸ್ತಿ 2026 ಪಡೆದು ಕರ್ನಾಟಕಕ್ಕೆ ಹೆಮ್ಮೆ ತಂದ ಸುಧಾ ಎಂ
ನವದೆಹಲಿ, ನವೆಂಬರ್ 7 (ಅಮರನಾಥ್ ಪ್ರಸಾದ್)
ಮಿಸೆಸ್ ಯೂನಿವರ್ಸ್ ಚಾರ್ಮ್ 2019 ಪ್ರಶಸ್ತಿ ವಿಜೇತೆ ಹಾಗೂ ಸುಧಾ ವೆಂಚರ್ಸ್ ಗ್ಲೋಬಲ್ ಈವೆಂಟ್ಸ್ ಸಂಸ್ಥೆಯ ಸಂಸ್ಥಾಪಕಿ ಮತ್ತು ನಿರ್ದೇಶಕಿ ಸುಧಾ ಎಂ. ಅವರು ಜಾಗತಿಕ ಈವೆಂಟ್ ಉದ್ಯಮದಲ್ಲಿ ಸಲ್ಲಿಸಿರುವ ಗಣನೀಯ ಕೊಡುಗೆ ಹಾಗೂ ಅಂತರರಾಷ್ಟ್ರೀಯ ಸಾಧನೆಗಳನ್ನು ಗುರುತಿಸಿ ಪ್ರತಿಷ್ಠಿತ ಗ್ಲೋಬಲ್ ಈವೆಂಟ್ ಎಕ್ಸಲೆನ್ಸ್ ಅವಾರ್ಡ್ 2026 ಪ್ರಶಸ್ತಿಗೆ ಭಾಜನರಾಗಿದ್ದಾರೆ.
ನವದೆಹಲಿಯಲ್ಲಿ ನಡೆದ ಭಾರತ್ ಲೀಡರ್ಶಿಪ್ ಸಮಿಟ್ ಅವಾರ್ಡ್ಸ್ 2026 ಸಮಾರಂಭದಲ್ಲಿ ಖ್ಯಾತ ಬಾಲಿವುಡ್ ನಟ ಹಾಗೂ ಸಮಾಜ ಸೇವಕ ಸೋನು ಸೂದ್ ಅವರು ಸುಧಾ ಎಂ. ಅವರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
1996ರಲ್ಲಿ ಸೌಂದರ್ಯ ಕ್ಷೇತ್ರದಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ ಸುಧಾ ಎಂ. ಅವರು ಇಂದು ಅಂತರರಾಷ್ಟ್ರೀಯ ಈವೆಂಟ್ ಆಯೋಜಕರಾಗಿ ಗುರುತಿಸಿಕೊಂಡಿದ್ದಾರೆ. ಸುಧಾ ವೆಂಚರ್ಸ್ ಗ್ಲೋಬಲ್ ಈವೆಂಟ್ಸ್ ಸಂಸ್ಥೆಯ ಮೂಲಕ ಭಾರತೀಯ ಪ್ರತಿಭೆ, ಫ್ಯಾಷನ್, ಸಂಸ್ಕೃತಿ, ಮಹಿಳಾ ಸಬಲೀಕರಣ ಹಾಗೂ ಭಾರತೀಯ ಸಾಧನೆಗಳಿಗೆ ಜಾಗತಿಕ ವೇದಿಕೆಯಲ್ಲಿ ಮನ್ನಣೆ ದೊರಕಿಸಿಕೊಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಕನ್ನಡ ರಾಜ್ಯೋತ್ಸವದ ವಿಶೇಷ ಸಂದರ್ಭದಲ್ಲಿ ರಾಷ್ಟ್ರೀಯ ವೇದಿಕೆಯಲ್ಲಿ ಕರ್ನಾಟಕವನ್ನು ಹೆಮ್ಮೆಯಿಂದ ಪ್ರತಿನಿಧಿಸಿದ ಸುಧಾ ಎಂ. ಅವರು ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಸಮಸ್ತ ಕನ್ನಡಿಗರಿಗೆ ಹಾಗೂ ಭಾರತದ ಜನತೆಗೆ ಸಮರ್ಪಿಸಿದ್ದಾರೆ.
ಪ್ರಶಸ್ತಿ ಸ್ವೀಕರಿಸಿದ ಸಂತಸವನ್ನು ಹಂಚಿಕೊಂಡ ಸುಧಾ ಎಂ. ಅವರು, “ಈ ಪ್ರಶಸ್ತಿ ಕೇವಲ ನನ್ನ ವೈಯಕ್ತಿಕ ಸಾಧನೆಯಲ್ಲ. ನನ್ನ ಪಯಣದಲ್ಲಿ ಬೆಂಬಲವಾಗಿ ನಿಂತು, ಪ್ರೋತ್ಸಾಹಿಸಿ, ಆಶೀರ್ವದಿಸಿದ ಪ್ರತಿಯೊಬ್ಬ ಕನ್ನಡಿಗರಿಗೂ ಇದು ಸಲ್ಲುತ್ತದೆ. ಅವರ ಪ್ರೀತಿ, ವಿಶ್ವಾಸ ಮತ್ತು ಶುಭ ಹಾರೈಕೆಗಳಿಂದಲೇ ಸುಧಾ ವೆಂಚರ್ಸ್ ಗ್ಲೋಬಲ್ ಈವೆಂಟ್ಸ್ ಇಂದು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಿದೆ. ಈ ಗೌರವವನ್ನು ನಾನು ಹೆಮ್ಮೆಯಿಂದ ಕರ್ನಾಟಕ ಮತ್ತು ಭಾರತಕ್ಕೆ ಸಮರ್ಪಿಸುತ್ತೇನೆ” ಎಂದು ಹೇಳಿದರು.
ಅಂತರರಾಷ್ಟ್ರೀಯ ಕಾರ್ಯಕ್ರಮಗಳು, ಸೌಂದರ್ಯ ಸ್ಪರ್ಧೆಗಳು, ಸಾಂಸ್ಕೃತಿಕ ಉತ್ಸವಗಳು ಹಾಗೂ ಮಹಿಳಾ ಸಬಲೀಕರಣದ ವಿವಿಧ ಉಪಕ್ರಮಗಳ ಮೂಲಕ ಸುಧಾ ವೆಂಚರ್ಸ್ ಗ್ಲೋಬಲ್ ಈವೆಂಟ್ಸ್ ಸಂಸ್ಥೆಯು ಹೊಸ ಪ್ರತಿಭೆಗಳಿಗೆ ಅವಕಾಶಗಳನ್ನು ಕಲ್ಪಿಸುತ್ತಿದೆ. ಜೊತೆಗೆ ಕರ್ನಾಟಕದ ಶ್ರೀಮಂತ ಸಂಸ್ಕೃತಿ, ಪರಂಪರೆ ಮತ್ತು ಸಾಧನೆಗಳನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಕಾರ್ಯವನ್ನೂ ನಿರಂತರವಾಗಿ ಮಾಡುತ್ತಿದೆ.





